Pages

Sunday, May 24, 2020

ದಾಸ ದಾಸರ ಮನೆಯ / Dasa Dasara maneya

ದಾಸ ದಾಸರ ಮನೆಯ


ರಚನೆ: ಶ್ರೀ ಕನಕ ದಾಸರು 

ದಾಸ ದಾಸರ ಮನೆಯ ದಾಸಾನು ದಾಸ
ಶ್ರೇಸ ಶ್ರೀರಂಗ ನಿಮ್ಮ ಮನೆಯದಾಸ

ಶಂಕು ದಾಸರ ಮನೆಯ ಮಂಕು ದಾಸನಾನಯ್ಯ
ಮಂಕು ದಾಸನು ನಾನು ರುಳುದಾಸಾ
ಸಂಕೀರ್ತನೆಯ ಮಾಡಿ ಮರೆದ ಭಕ್ತರ ಮನೆಯ
ಭಿಂಕದಿ ಬಾಗಿಲ ಕಾಯ್ವ ಬಡದಾಸನಾನಯ್ಯ

ಕಾಳಿ ದಾಸನ ಮನೆಯ ಕೀಳುದಾಸ ನಾನಯ್ಯ
ಆಳುದಾಸರ ಮನೆಯ ಮೂಳ ದಾಸಾ
ಪಾಲಾಕ್ಷ ಸಖ ನಿನ್ನ ಭಜಿಪ ಭಕ್ತರ ಮನೆಯ
ಆಳಿನಾಳಿನಾ ದಾಸ ಅಡಿದಾಸ ನಾನಯ್ಯ

ಹಲವು ದಾಸರ ಮನೆಯ ಹೂಲೆದಾಸ ನಾನಯ್ಯ
ಕುಲ ವಿಲ್ಲದ ದಾಸ ಕುರುಬದಾಸ
ಛಲದಿ ನಿನ್ನ ಭಜಿಸುವವರ ಮನೆಯ ಮಾದಿಗದಾಸ
ಸೆಲೆ ಮುಚ್ಚಿ ಪಾಲಿಸನ್ನ ಒಡೆಯ ಆದಿಕೇಶವರಾಯ


Dasa Dasara maneya 

Author : Kanaka Dasaru

Dasadasara Maneya Dasanudasa Naanu
Srisha Sriranga Nimma Maneya Dasa

Shankudasara Maneya Mankudasanu Naanayya
Mankudasanu Naanu Maruladasa
Sankirtaneya Madi Neneva Baktara Maneya
Binkada Bagila Kayva Badadasa Nanu

Kalidasara Maneya Keeludasanu Naanayya
Aaludasanu Naanu Mooladasa
Paalaksha Saka Ninna Bhajipa Bhaktara Maneya
Aalinaalina Dasanadidasa Naanayya

Halavu Dasara Maneya Holedasa Naanayya
Kulavillada Dasa Kuruba Dasa
Chaladi Ninna Bhajisuvavara Maneya Maadiga Dasa
Sale Mukti Paalisennodeya Aadikeshavaraya



Version - 2
ದಾಸದಾಸರ ಮನೆಯ ದಾಸಾನುದಾಸ ನಾನು
ಶ್ರೀಶ ಶ್ರೀರಂಗ ನಿಮ್ಮ ಮನೆಯ ದಾಸ ||ಪ||

ಕಾಳುದಾಸರ ಮನೆಯ ಆಳು ದಾಸ ನಾನಯ್ಯ
ಕೀಳುದಾಸನು ನಾನು ಕಿರಿಯ ದಾಸ
ಭಾಳಾಕ್ಷ ಮುಂತಾಗಿ ಭಜಿಪ ದೇವರ ಮನೆಯ
ಆಳಿನ ಆಳಿನ ಆಳಿನಡಿದಾಸ ನಾನು||೧||

ಪಂಕಜನಾಭನ ಮನೆಯ ಮುಂಕುದಾಸನಯ್ಯ
ಕೊಂಕುದಾಸನು ನಾನು ಕುರುಡು ದಾಸ
ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ
ಬಂಕದ ಬಾಗಿಲ ಕಾಯ್ವ ಬಡದಾಸ ನಾನು ||೨||

ಹಲವು ದಾಸರ ಮನೆಯ ಹೊಲೆದಾಸ ನಾನಯ್ಯ
ಕುಲವಿಲ್ಲದ ದಾಸ ಕುನ್ನಿದಾಸ
ಮಲಹರ ರಂಗ ನಿನ್ನ ಮನೆಯ ಮಾದಿಗ ದಾಸ
ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ| |೩||

Listen to song by Shri Vidyabhushana



Listen to song by Kasaravalli Sisters 


Listen to song by Shri Vidwan Koviladi Madhwa Prasad


No comments:

Post a Comment