Pages

Tuesday, May 12, 2020

ಲಾಲಿಸಿದಳು ಮಗನ ಯಶೋದೆ / Lalisidalu magana yashode

ಲಾಲಿಸಿದಳು ಮಗನ ಯಶೋದೆ



ರಚನೆ : ಪುರಂದರ ದಾಸರು


ಲಾಲಿಸಿದಳು ಮಗನ ಯಶೋದೆ
ಲಾಲಿಸಿದಳು ಮಗನ

ಅರಳೆಲೆ ಮಾಗಾಯಿ ಬೆರಳಿಗುಂಗುರವಿಟ್ಟು
ತರಳನ ಮೈಸಿರಿ ತರುಣಿ ನೋಡುತ ಹಿಗ್ಗಿ ||೧||

ಬಾಲಕನೆ ಕೆನೆ ಹಾಲು ಮೊಸರನೀವೇ
ಲೀಲೆಯಿಂದಲಿ ಎನ್ನ ತೋಳ ಮೇಲೆ ಮಲಗೆಂದು ||೨||

ಮುಗುಳುನಗೆಯಿಂದ ಮುದ್ದು ತಾತಾರೆಂದು
ಜಗದೊಡೆಯನ ಶ್ರೀಪುರಂದರ ವಿಠಲನ ||೩||


Lalisidalu magana yashode 

Author : Purandara Dasaru


Lalisidalu magana yashode 

lalisidalu magana

Aralele magayi beraligunguravittu
Taralana maisiri taruni noduta higgi ||1||

Balakane kene halu mosara neevee
Leeleyindali yenna tola mele malagendu ||2||

Mugulu nageyinda muddu tatarendu
Jagadodeyana shriPurandara vitthalana ||3||



Listen to song adapted in Kannada Movie : Devaru Kotta Tangi



Listen to Song by Ajay Warrier








No comments:

Post a Comment