Pages

Saturday, May 23, 2020

ಘಟಿಕಾಚಲದಿ ನಿಂತ ಪಟು ಹನುಮಂತ / Ghatikachaladi Ninta Shree Hanumanta

ಘಟಿಕಾಚಲದಿ ನಿಂತ ಪಟು ಹನುಮಂತ


ರಚನೆ  : ಶ್ರೀ ಪುರಂದರ ದಾಸರು 

ಘಟಿಕಾಚಲದಿ ನಿಂತ ಶ್ರೀ ಹನುಮಂತ
ಪಠನೆಯ ಮಾಡಲುತ್ಕಟದಿ ಪೊರೆವೆನೆಂದು ॥ಪ॥

ಚತುರ ಯುಗದಿ ತಾನು ಮುಖ್ಯಪ್ರಾಣನು
ಚತುರಮುಖನಯ್ಯನ
ಚತುರ ಮೂರುತಿಗಳನು ಚತುರತನದಿ ಭಜಿಸಿ
ಚತುರ್ಮುಖನಾಗಿ ಜಗಕೆ ಚತುರ್ವಿಧ ಫಲ ಕೊಡುತ ॥೧॥

ಸರಸಿಜ ಭವಗೋಸ್ಕರ ಕಲ್ಮಷದೂರ
ವರ ಚಕ್ರತೀರ್ಥ ಸರ
ಮೆರೆವಾಚಲದಿ ನಿತ್ಯ ನರಹರಿಗೆದುರಾಗಿ
ಸ್ಥಿರಯೋಗಾಸನದಿ ಕರೆದು ವರಗಳ ಕೊಡುತ ॥೨॥

ಶಂಖ ಚಕ್ರವ ಧರಿಸಿ ಭಕ್ತರ ಮನ
ಬಿಂಕವ ಪರಿಹರಿಸಿ
ಪಂಕಜನಾಭ ಶ್ರೀ ಪುರಂದರವಿಠಲನ
ಬಿಂಕದ ಸೇವಕ ಸಂಕಟ ಕಳೆಯುತ ॥೩॥

Ghatikachaladi Ninta Shree Hanumanta 

Author : Shri Purandara Dasaru

Gatika Chaladi ninta Sri hanumanta Sri hanumanta
Gatika Chaladi ninta patu hanumantanu pathaneya madalu tatadi porevenendu ||

Chaturayugadi tanu atibalavaatanu 

chaturmukanayyanu
Chaturamurutigala chaturatanadi bhajisi 
chaturmukanagi chaturvida Pala koduta 1

Sarasija bhavagoskara kalmasha dura
varachakratirthasara
Merevaachaladi nitya naraharigeduragi 
sthirayogasanadi karedu vargaLa koduta 2

Shanka chakrava dharisi bhaktara mana
binkava pariharisi
Pankajanabha shri purandara vithalana
bhinkada sevaka sankata kaleyuta 3
Listen to song by Shri Puttur Narasimha Nayak


Listen to song by Shri Raichur Sheshagiridas


No comments:

Post a Comment