Pages

Monday, May 18, 2020

ಧವಳ ಗಂಗೆಯ ಗಂಗಾಧರ ಮಹಾಲಿಂಗ / Dhavala gangeya gangAdhara mahAlinga

ಧವಳ ಗಂಗೆಯ ಗಂಗಾಧರ ಮಹಾಲಿಂಗ



ರಚನೆ : ಶ್ರೀ ಗುರು ವಾದಿರಾಜರು 

ಧವಳ ಗಂಗೆಯ ಗಂಗಾಧರ ಮಹಾಲಿಂಗ
ಮಾಧವನ ತೋರಿಸಯ್ಯ ಗುರುಕುಲೋ ತ್ತುಂಗ || ಪ ||

ಅರ್ಚಿಸಿದವರಿಗಭೀಷ್ಟಯ ಕೊಡುವ
ಹೆಚ್ಚಿದ ಅಘಗಳ ತರಿದು ಬಿಸುಟುವ
ದುಶ್ಚರಿತಗಲೆಲ್ಲ ದೂರದಲ್ಲಿಡುವ
ನಮ್ಮಚ್ಯುತಗಲ್ಲದ ಅಸುರರ ಬಡಿವ || ೧ ||

ಮಾರನ ಗೆದ್ದ ಮನೋಹರ ಮೂರ್ತಿ
ಸಾರ ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೆಲ್ಲ ತುಂಬಿತು ನಿನ್ನ ಕೀರ್ತಿ
ಮುರಾರಿಯ ತೋರಿಸಯ್ಯ ನಿನಗೆ ಶರಣಾರ್ಥಿ || ೨ ||

ಚೆನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀನೆನ್ನ
ಅನ್ಯರನರಿಯೆನೊ ಗುರುವೆಂಬೆ ನಿನ್ನ
ಇನ್ನಾದರು ಹರಿಯ ತೋರೊ ಧೀರ ಮುಕ್ಕಣ್ಣ || ೩ ||


Dhavala gangeya gangAdhara mahAlinga 

Composed by – Sri Guru Vaadi Rajaru

dhavaLa gangeya gangAdhara mahAlinga
mAdhavana tOrisayya gurukulO ttunga || pa ||

archisidavarigabhIShTava koDuva
hechchida aghagaLa taridu bisuTuva
duScharitagalella dUradalliDuva
nammachyutagallada asurara baDiva || 1 ||

mArana gedda manOhara mUrti
sAra sajjanarige sura chakravarti
dhAruNiyella tuMbitu ninna kIrti
murAriya tOrisayya ninage SharaNArthi || 2 ||

chenna prasanna SrI hayavadananna
anudina nenevante mADo nInenna
anyaranariyeno guruveMbe ninna
innAdaru hariya tOro dhIra mukkaNNa || 3 ||

Listen to song adapted in Kannda Serial Shri Raghavendra Vaibhava



Listen to Song here



No comments:

Post a Comment