Pages

Thursday, May 28, 2020

ಎದ್ದು ಬರುತಾರೆ ನೋಡೆ / Yeddu baruthare node

ಎದ್ದು ಬರುತಾರೆ ನೋಡೆ


ರಚನೆ : ಶ್ರೀ ಗುರು ಜಗನ್ನಾಥ ದಾಸರು 

ಎದ್ದು ಬರುತಾರೆ ನೋಡೆ – ಗುರುಗಳು ತಾ
ವೆದ್ದು ಬರುತಾರೆ ನೋಡೆ || ಪ ||

ಮುದ್ದು ಬೃಂದಾವನ ಮಧ್ಯದೊಳಗಿಂದ
ತಿದ್ದಿ ಹಚ್ಚಿದ ನಾಮ ಮುದ್ರೆಗಳಿಂದೊಪ್ಪುತಲಿ  || ಅ ಪ ||

ಗಳದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಯು
ಚೆಲುವ ಮುಖದೊಳು ಪೊಳೆವೊ ದಂತಗಳಿಂದ || ೧ ||

ಹೃದಯಮಂದಿರದಲ್ಲಿ ಪದುಮನಾಭನ ಭಜಿಸಿ
ಮುದಮನದಲಿ ನಿತ್ಯ ಸದಮಲ ರೂಪತಾಳಿ || ೨ ||

ದಾತ ಗುರುಜಗನ್ನಾಥವಿಠ್ಠಲನ್ನ
ಪ್ರೀತಿಯ ಪಡಿಸುತ ದೂತರ ಪೊರೆಯುತ || ೩ ||

Yeddu baruthare node

Author : Guru Jagannatha Dasaru

Yeddu baruthare node, tha
veddu baruthare node ||pa||

Muddu Brindavana madhyadolaginda
Thiddi hachchida nama mudregaloputhive ||a pa||

Galadolu Shri Tulasi Nalinakshi Malegalu
Cheluva Mukhadolu Poleva Danthagalinda ||1||

Hridaya Sadanadalli Padubhanamana bhajisi
mudamanadinda Nitya SadaMalaRoopa Thali ||2||

Data Guru Jaganatha Vittalana
Prithiya Padisutha Doothara Poreyutha ||3||


Listen to song by Shri Vidyabhushana


Listen to song by Puttur Narasimha Nayak


Listen to song by Bellur Sisters


Listen to song by Smt Parimala Giriachar




No comments:

Post a Comment