Pages

Thursday, May 14, 2020

ರಾಘವೇಂದ್ರ ಗುರು ರಾಯರ ಸೇವಿಸಿರೋ / Raghavendra Guru Rayara sevisiro

ರಾಘವೇಂದ್ರ ಗುರು ರಾಯರ ಸೇವಿಸಿರೋ

ಗುರು ರಾಯರ ಮಹಿಮೆಗಳನ್ನು ಹೊಗಳುವ ಈ ಹಾಡು , ರಾಯ ಸೇವೆಯನ್ನು ಮನುಷ್ಯರು ಏಕೆ ಮಾಡಬೇಕು ಮತ್ತು ರಾಯರ ಅನುಗ್ರಹ ಪಡೆಯುವುದು ಹೇಗೆಂದು ಸಾರುತ್ತದೆ


ರಚನೆ : ಶ್ರೀ ಶ್ರೀದ ವಿಠ್ಠಲ ದಾಸರು 


ರಾಘವೇಂದ್ರ ಗುರು ರಾಯರ ಸೇವಿಸಿರೋ
ಸೌಖ್ಯದಿ ಜೀವಿಸಿರೋ ॥ಪ॥
ತುಂಗಾತೀರದಿ ರಘುರಾಮನ ಪೂಜಿಸಿರೋ
ನರಸಿಂಘನ ಭಜಕರೋ ॥ಅಪ॥

ಶ್ರೀ ಸುಧೀಂದ್ರ ಕರ ಸರೋಜ ಸಂಜಾತ ಜಗದೊಳಗೆ ಪುನೀತ
ದಶರಥಿಯ ದಶತ್ರ್ವವ ತಾ ವಹಿಸಿ ದುರ್ಮತಿಗಳ ಜಯಿಸಿ
ಈ ಸಮೀರ ಮತ ಸಂಸ್ಥಾಪಕರಾಗಿ ನಿಂದಕರನು ನೀಗಿ
ಭೂಸುರರಿಗೆ ಸಂಸೇವ್ಯ ಸದಾಚರಣೀ ಕಂಗೊಳಿಸುವ ಕರುಣಿ ॥೧॥

ಕುಂದದ ವರ ಮಂತ್ರಾಲಯದಲ್ಲಿರುವ ಕರೆದಲ್ಲಿಗೆ ಬರುವ
ಬೃಂದಾವನಗತ ಮೃತ್ತಿಕೆ ಜಲಪಾನ ಮುಕುತಿಗೆ ಸೋಪಾನ
ಸಂದರುಶನಮಾತ್ರದಲಿ ಮಹಾತಾಪ ಬಡಿದೋಡಿಸಲಾಪ
ಮಂದಭಾಗ್ಯರಿಗೆ ದೊರೆಯದಿರುವ ಸೇವೆ ಶರಣರ ಸಂಜೀವಾ ॥೨॥

ಶ್ರೀದ ವಿಠಲನ ಸನ್ನಿಧಾನ ಪಾತ್ರ ಸಂಸ್ಕೃತಿಸಲು ಮಾತ್ರ
ಮೋದ ಪಡಿಸುತಿಹ ತಾನಿಹಪರದಲ್ಲಿ ಈತಗೆ ಸರಿಯಲ್ಲಿ
ಮೇದಿನಿಯೊಳಗಿನ್ನರಸಲು ನಾ ಕಾಣೆ ಪುಸಿಯಲ್ಲಾಣೆ
ಪಾದಸ್ಮರಣೆಯ ಮಾಡದವನೆ ಪಾಪಿ ನಾ ಪೇಳುವೆ ಸ್ತಪಿ ॥೩॥


Raghavendra Guru Rayara sevisiro 

Author : Shree Shreeda Vittala Dasaru

Raghavendra Guru Rayara sevisiro
soukyadi jivisiro ||pa||

tungatheeradi raghuramana poojisiro
narasinghana bhajakaro ||ap||

sree sudheendra kara saroja sanjata jagadolage punitA
dasharatiya dasatvava ta vahisi
durmatigala jayisi
ee sameera mata samstApakarAgi nindakaranu neegi
busurarige samsevya sadacharanee
kangolisuva karuni ||1||

kundada vara mantralayadalliruva
karadallige baruva brindavanagata mrittike jalapAna
mukutige sopAna
sandarushanamAtradali mahatApa badidoisalApa
mandabhAgyarige doreyadiruva seva
sharanara sanjeevA ||2||

srida vithalana sannidana pAtra
samstutisalu mAtra moda padisutiha tanihaparadalli
itage sariyalli
mediniyolaginnarasalu nA kane pusiyallaane
pAdasmaraneya madadavane papi
na peluve stapi ||3||


Listen to song by Pt Shesgiri das ji





No comments:

Post a Comment