Pages

Saturday, May 30, 2020

ನಡೆದು ಬಾಮ್ಮ ಲಕ್ಷ್ಮೀ ನಿನಗೆ ನಡೆಮುಡಿಯ ಹಾಸುವೆ / NaDedu Baamma Lakshmi Ninage Nademudiya Hasuve


ರಚನೆ  : ಶ್ರೀ ಪ್ರಸನ್ನ ವೆಂಕಟ ದಾಸರು 

ನಡೆದು ಬಾಮ್ಮ ಲಕ್ಷ್ಮೀ ನಿನಗೆ
ನಡೆಮುಡಿಯ ಹಾಸುವೆ|
ನಡೆಮುಡಿಯ ಹಾಸಿ ನಾ
ಚರಣ ಕಮಲಕ್ಕೆರಗುವೆ||

ಮರುಗ,ಮಲ್ಲಿಗೆ,ಧವನ,ಸಂಪಿಗೆ
ಸರಗಳ್ಲನೇ ಪೂಜಿಪೆ|
ಸರಗಳ್ಲನೇ ಪೂಜಿಸಿ
ನಾ ವರಗಳ್ಲನ್ನೇ ಬೇಡುವೆ||

ಹೀರೆ,ಕುಂಬಳ ಕಾಯಿ,ಪಡವಳ
ಶಾಖ ಪಾಕವ ಮಾಡುವೆ|
ಘನ್ನ ಶಾವಿಗೆ ಭಕ್ಷವು
ನೈವೇದ್ಯವು ಪರಮಾನ್ನವು||

ಎಷ್ಟು ಬೇಡಿದರು ದಯ ಏಕೆ ಬರಲಿಲ್ಲ
ಲಕ್ಷ್ಮೀ ನಿನಗೆ|
ದಿಟ್ಟ ಪ್ರಸ್ಸನ್ನ ವೆಂಕಟ ವಿಠ್ಠಲನ  
ಪಟ್ಟದರಾಣಿಯೆ||

Author : Shri Prasanna Venkata Dasaru

naDedu baamma lakshmi ninage
naDemuDiya haasuve|
naDemuDiya haasi naa
charaNa kamalakkeraguve||

maruga,mallige,dhavana,saMpige
saragaLlanE pUjipe|
saragaLlanE pUjisi
naa varagaLlannE bEDuve||

heere,kuMbaLa kaayi,paDavaLa
shaakha paakava maaDuve|
ghanna shaavige bhakShavu
naivEdyavu paramaannavu||
eShTu bEDidaru daya Eke baralilla
lakShmi ninage|
diTTa prassanna veMkaTa viTTalana
paTTadaraaNiye||


Listen to song by Shri Puttur Narasimha Nayak





No comments:

Post a Comment