Pages

Sunday, May 24, 2020

ಯಾದವರಾಯ ಬೃಂದಾವನದೊಳು / YadavarAya brundavanadolu

ಯಾದವರಾಯ ಬೃಂದಾವನದೊಳು

ರಚನೆ : ಶ್ರೀ ಕನಕದಾಸರು

ಯಾದವರಾಯ ಬೃಂದಾವನದೊಳು
ವೇಣು ನಾದವ ಮಾಡುತಿರೆ || ಪ ||

ರಾಧಾ ಮುಂತಾದ ಗೋಪಿಯರೆಲ್ಲ
ಮಧುಸೂದನ ನಿನ್ನನು ಸೇವಿಸುತಿರೆ
ಸುರರು ಅಂಬರದಿ ಸಂದಣಿಸಿರೆ
ಅಪ್ಸರ ಸ್ತ್ರೀಯರು ಮೈ ಮರೆತಿರೇ || ಅ||

ಕರದಲಿ ಕೊಳಲನು ಊದುತ ಪಾಡುತ
ಸ ರಿ ಗ ಮ ಪ ದ ನಿ ಸ್ವರಗಳ ನುಡಿಸುತ
ಹರಿ ಹರ ಬ್ರಹ್ಮರು ನಲಿದಾಡುತಿರೆ
ತುಂಬುರು ನಾರದರು ಪಾಡುತಿರೆಚರಣ ||೧||

ಅರವಿಂದ ದಳ ನಯನ ಕೃಷ್ಣ
ಕರುಗಳ ಸಹಿತ ಗೋವುಗಳನೆಲ್ಲ
ಸಿರಿಕಾಗಿನೆಲೆಯಾದಿ ಕೇಶವರಾಯ
ತಿರುಗಿದ ಮೆಲ್ಲನೆ ವರ ಗೋಪಾಲ ||೨||

YadavarAya brundavanadolu 

Author : Shree Kanaka Dasaru

yAdavarAya brndAvanadoLu
vENunAdava mADutirE 
||p||


rAdhA muntAda gOpiyarella
madhusUdana nimmanu sEvisuttirE
Suraru ambaradi sandaNisire
apsara streeyaru maimaretire  
||a pa||

karadalli koLalanu Uduta pADuta
sa ri ga ma pa dha ni svaragaLa nuDisuta
harihara brahmaru nalidADutirE
tumburu nArada pADutirE 
||1||

aravinda daLa nayana krSNa
karugaLa sahita gOvgaLanella
sirikAgi neleyadi kEshavarAya
tirigida mellane vara gOpAla 
||2||

Listen to song by Chitra



Listen to song below by Sudha Ragunathan



Listen to song by ML Vasanthakumari




No comments:

Post a Comment