Pages

Wednesday, May 20, 2020

ಮಾತು ಮಾತಿಗೆ ಕೇಶವ ನಾರಾಯಣ / Maatu maatige keshava narayana

ಮಾತು ಮಾತಿಗೆ ಕೇಶವ ನಾರಾಯಣ


ರಚನೆ : ಶ್ರೀ ಗುರು ವಾದಿರಾಜ ತೀರ್ಥರು 

ಮಾತು ಮಾತಿಗೆ ಕೇಶವ ನಾರಾಯಣ
ಮಾಧವ ಎನಬಾರದೆ – ಹೇ ಜಿಹ್ವೆ ||ಪಲ್ಲವಿ||

ಪ್ರಾತಃಕಾಲದಲೆದ್ದು ಪಾರ್ಥಸಾರಥಿಯೆಂದು
ಪ್ರೀತಿಲಿ ನೆನೆದು ಸುಪ್ರೀತನಾಗುವ ಹರಿಯ
ಮಾತುಗಳಾಡಲ್ಯಾಕೆ – ಹೇ ಜಿಹ್ವೆ ||ಅನುಪಲ್ಲವಿ||

ಜಲಜನಾಭನ ನಾಮವು ಈ ಜಗಕ್ಕೆಲ್ಲ
ಜನನ ಮರಣಹರವು
ಸುಲಭವಾಗಿಹುದು ಸುಖಕೆ ಕಾರಣವಿದು
ಬಲ್ಲಿದ ಪಾಪಗಳನ್ನೆಲ್ಲ ಪರಿಹರಿಸುವುದೆಂದು
ತಿಳಿದು ತಿಳಿಯದಿಹರೇ – ಹೇ ಜಿಹ್ವೆ ||೧||

ತರಳೆ ದ್ರೌಪದಿಯ ಸೀರೆ ಸೆಳೆಯುತಿರೆ
ಹರಿ ನೀನೆ ಗತಿಯೆನಲು
ಪರಮ ಪುರುಷ ಭವಭಂಜನ ಕೇಶವ
ದುರುಳರ ಮರ್ದಿಸಿ ತರುಣಿಗೆ ವರವಿತ್ತ
ಹರಿನಾಮ ಪ್ರಿಯವಲ್ಲವೇ – ಹೇ ಜಿಹ್ವೆ||೨||

ಹೇಮ ಕಶ್ಯಪ ಸಂಭವ ಈ ಜಗಕ್ಕೆಲ್ಲ
ನಾಮವೇ ಗತಿಯೆನಲು
ಪ್ರೇಮದಿಂದಲಿ ಬಂದು ಕಾಮಿತಾರ್ಥಗಳಿತ್ತ
ಸ್ವಾಮಿ ಹಯವದನನ ನಾಮವ ನೆನೆಯುತ್ತ
ಯಾಮ ಯಾಮಕೆ ಬಿಡದೆ – ಹೇ ಜಿಹ್ವೆ||೩||

Maatu maatige keshava narayana

Author : Shee Guru Vaadiraja Teertharu

Maatu maatige keshava narayana
Madhava enabarade he jihve ||pa||

Pratahkaladoleddu parthasarathiyendu
Pritili neneye supritanaguva hariya
maatugaLaadalyaake he jihve ||a.pa||

Jalajanabana namavu ee jagakkella janana marana haravu
Sulabavendenalagi sukhakke karanavidu
Ballida papagalannella pariharisuvudendu
Tilidu tiliyadihare he jihve ||1||

TaraLe draupadi seereya seleyutire hari nine gatiyenalu
Paramapurusha bavabanjana kesava
Durulara mardisi tarunigabayavitta
Hari naamapriyavallave - he jihve ||2||

Hemakasyapasambava I jagakkella namave gatiyenalu
naamave gati enalu premadindali bandu kaamitaarthagaLitta
Svami hayavadanana naamava neneyutta
yaama yaamake bidade - he jihve ||3||


Listen to song here



No comments:

Post a Comment