ಮನ್ನಾರು ಕೃಷ್ಣಗೆ ಮಂಗಳ
ಗೀತ ರಚನೆ : ಶ್ರೀ ಪುರಂದರ ದಾಸರು
ಮನ್ನಾರು ಕೃಷ್ಣಗೆ ಮಂಗಳ , ಜಗವ
ಮನ್ನಿಸಿದೊಡೆಯಗೆ ಮಂಗಳ ||ಪ||ಬೊಮ್ಮನ ಪಡೆದಗೆ , ಭಕ್ತರುದ್ಧಾರಿಗೆ
ಕಮ್ಮಗೋಲನಯ್ಯಗೆ ಮಂಗಳ
ಧರ್ಮರಕ್ಷಕನಿಗೆ ದಾನವಶಿಕ್ಷಗೆ
ನಮ್ಮ ರಕ್ಷಿಸುವಗೆ ಮಂಗಳ ||೧||
ತುರುಗಳ ಕಾಯ್ದಗೆ ಕರುಣಾಕರನಿಗೆ
ಗಿರಿಯನೆತ್ತಿದವಗೆ ಮಂಗಳ
ವರದ ತಿಮ್ಮಪ್ಪಗೆ ವಾರಿಜನಾಭಗೆ
ಹರಿ ಸರ್ವೋತ್ತಮನಿಗೆ ಮಂಗಳ ||೨||
ದೇವಕಿದೇವಿಯ ತನಯಗೆ ಮಂಗಳ
ದೇವ ತಿಮ್ಮಪ್ಪಗೆ ಮಂಗಳ
ಮಾವನ ಕೊಂದು ಮಲ್ಲರ ಮಡುಹಿದ
ಪುರಂದರವಿಠಲಗೆ ಮಂಗಳ ||೩||
Mannaru krishnage mangala
Author : Shree Purandara Dasaru
mannaru krishnage mangala, jagavamannisidoDeyage mangala ||pa||
bommana paDedage, bhaktarudyarage
kammagOlanayyage mangala
bharmarakhakanige daanashikshakage
namma rakshisuvage mangala ||1||
tarugala kayvage karunakaranige
giriyanettidavage mangala
varada timmappage vaarijanaabhage
harisarvottamanige mangala ||2||
devakideviya tanayage mangala
deva timmappage mangala
maavana kondu mallara maDuhida
purandara vithalage mangala ||3||
Listen to song by Roopa-Deepa
No comments:
Post a Comment