Pages

Thursday, May 28, 2020

ರಥವನೇರಿದ ರಾಘವೇಂದ್ರ / Rathavanerida Raghavendra

ರಥವನೇರಿದ ರಾಘವೇಂದ್ರ


ರಚನೆ : ಶ್ರೀ ಗೋಪಾಲ ದಾಸರು 

ರಥವನೇರಿದ ರಾಘವೇಂದ್ರ ಸದ್ಗುಣಗಣಗಳ ಸಾಂದ್ರಾ ||ಪ||

ಸತತ ಮಾರ್ಗದಿ ಸಂತತ ಸೇವಿಪರಿಗೆ
ಅತಿ ಹಿತದಲಿ ಮನೋರಥವ ನೀಡುವೆನೆಂದು ||ಅ.ಪ||

ಚತುರ ದಿಕ್ಕುವಿದಿಕ್ಕುಗಳಲ್ಲಿ ಅರಿಪ ಜನರಲ್ಲಿ
ಮಿತಿಯಿಲ್ಲದೆ ಬಂದು ಓಲೈಸುತಲಿ ವರಗಳ ಬೇಡುತಲಿ
ನುತಿಸುತ ಪರಿಪರಿ ನತರಾಗಿಹರಿಗೆ
ಗತಿಪೇಳದೆ ಸರ್ವಥಾ ನಾ ಬಿಡೆನೆಂದು ||೧||

ಅತುಲ ಮಹಿಮಾನೆ ಆ ದಿನದಲ್ಲಿ ದಿತಿಜ  ವಂಶದಲಿ
ಉತ್ಪತ್ತಿಯಾಗಿ ಉಚಿತದಲ್ಲಿ ಉತ್ತಮಮತಿಯಲ್ಲಿ
ಅತಿಶಯವಿರುತಿರೆ ಪಿತನ ಬಾಧೆಗೆ ಮನ್ಮಥ-
ಪಿತನೊಲಿಸಿದೆ ಜಿತ ಕರುಣದಲಿ ||೨||

ಪ್ರಥಮ ಪ್ರಹ್ಲಾದ ವ್ಯಾಸಮುನಿಯೆ ಯತಿ ರಾಘವೇಂದ್ರ
ಪ್ರತಿವಾದಿಕದಳಿವನಕರಿಯೆ ಕರ ಮುಗಿವೆನು ದೊರೆಯೆ
ಕ್ಷಿತಿಯೊಳು ಗೋಪಾಲವಿಠಲನ ಸ್ಮರಿಸುತ ವರ
ಪ್ರತಿ ಮಂತ್ರಾಲಯದೊಳು ಅತಿ ಮೆರೆವೆ ||೩||

Rathavanerida Raghavendra 

Author : Shri Gopala Dasaru

Rathavanerida Raghavendra sadgunagaLa saandra ||pa||

satata margadi santata seviparige
ati hitadali manorathava niduvenendu || a pa||

chatura dikkuvidikkugaLalli aripa janaralli
mitiyillade bandu Olaisutali varagala bedutali
nutisuta paripari nataragiharige
gati pelade sarvatha bidenendu ||1||

atulamahimaneeya dinadalli ditija vamshadali
utapattiyagi uchitadali uttama matiyalli
atishayavirutire pitana badhege man-
mathapitanoliside jitakarunadali ||2||

prathama prahlada vyasamuniye yati rAghavEndra
prativadi kadalivana kariye karamugivenu doreye
kshitiyoLu gopalaviThalana smarisuta
prati mantralayadolu ati mereve ||3||

Listen to song by Shri Puttur Narasimha Nayak


Listen to song by Shri Mysore Ramachandrachar

Listen to song by Smt Sangeetha Balachandra



No comments:

Post a Comment