Pages

Wednesday, May 27, 2020

ಹ್ಯಾಂಗೆ ಮಾಡಲಯ್ಯ ಕೃಷ್ಣ / HyangE maaDalayya KrishNa

ಹ್ಯಾಂಗೆ ಮಾಡಲಯ್ಯ ಕೃಷ್ಣ


ರಚನೆ : ಶ್ರೀ ಗೋಪಾಲದಾಸರು

ಹ್ಯಾಂಗೆ ಮಾಡಲಯ್ಯ ಕೃಷ್ಣ ಹೋಗುತಿದೆ ಆಯುಷ್ಯ
ಮಂಗಳಾಂಗ ಭವ ಬಂಧನ ಬಿಡಿಸಿ ನಿನ್ನ ಡಿಂಗರಿಗನ ಮಾಡೋ ಅನಂಗಜನಕ ।। ಪ ।।

ಯೇಸು ಜನುಮದ ಸುಕೃತದ ಫಲವೋ ತಾನು ಜನಿಸಲಾಗಿ
ಭೂಸುರದೇಹದ ಜನುಮವು ಎನಗೆ ಸಂಭವಿಸಿದೆಯಾಗಿ ।
ಮೋದತೀರ್ಥ ಮತ ಚಿಹ್ನಿತನಾಗದೆ ದೋಷಕೆ ಒಳಗಾಗಿ
ಲೇಶಸಾಧನವ ಕಾಣದೆ ದುಃಸಹವಾಸದಿಂದಲೇ ದಿನ ದಿನ ಕಳದೆ ।।೧।।

ಶಶಿಮುಖಿ ಕನಕದ ಆಸೆಗೆ ಬೆರೆತು ವಸುಪತಿ ನಿನ್ನಡಿಯ
ಹಸನಾಗಿ ನಿನ್ನ ನೆನೆಯದೆ ಕೃಪೆಯ ಗಳಿಸದೆ ಕೆಟ್ಟೆನಯ್ಯ ।
ನಿಶೆಹಗಲು ಸ್ಥಿರವೆಂದು ತನುವನು ಪೋಷಿಸಲಾಶಿಸಿ ಜೀಯ
ಕುಸುರಿದೆ ನೆಲವೋ ಸರ್ವಕಾಲ ನಿನ್ ಒಡೆತನವೆಂಬುವ ಬಗೆಯನು ಅರಿಯದೆ ।।೨।।

ನೆರೆನಂಬಿದ ಪಾವಟಿಗಳು ಎಲ್ಲಾ ಸರಿದು ಹೋದವಲ್ಲಾ
ಮರಳಿ ಈ ಪರಿಯ ಜನುಮವು ಬರುವ ಭರವಸೆಯಂತು ಇಲ್ಲಾ ।
ಪರಿಪರಿ ವಿಷಯದ ಆಶೆಯು ಎನಗೆ ಕಿರಿದು ಆಯಿತಲ್ಲಾ
ಹರಿಯೇ ಜಗದಿ ನೀನೊಬ್ಬನಲ್ಲದೆ ಪೊರೆವರಿನ್ನಾರು ಇಲ್ಲವಲ್ಲಾ ।।೩।।

ಅವನಿ ಒಳಗೆ ಪುಣ್ಯ ಕ್ಷೇತ್ರ ಚರಿಸುವ ಹವಣಿಕೆ ಎನಗಿಲ್ಲಾ
ಪವನಾತ್ಮಕ ಗುರು ಮಧ್ವ ಶಾಸ್ತ್ರದ ಪ್ರವಚನ ಕೇಳಲಿಲ್ಲಾ ।
ತವಕದಿಂದ ಗುರು ಹಿರಿಯರ ಸೇವಿಸಿ ಅವರ ಒಲಿಸಲಿಲ್ಲಾ
ರವಿನಂದನ ಕೇಳಿದರ ಉತ್ತರ ಕೊಡೆ ವಿವರಸರಕು ಒಂದಾದರು ಇಲ್ಲಾ ।।೪।।

ಭಾಗವತರೊಡಗೂಡಿ ಉಪವಾಸ ಜಾಗರ ಒಂದುದಿನ ಮಾಡಲಿಲ್ಲಾ
ರಾಗದಿ ಶುಕಮುನಿ ಪೇಳ್ದ ಹರಿಕಥೆ ಸಂಯೋಗವೆಂಬೋದಿಲ್ಲಾ ।
ನೀಗುವಂತ ಭವ ಭಯವ ಭಕುತಿ ವೈರಾಗ್ಯವೆಂಬೋದಿಲ್ಲಾ
ಯೋಗಿವಂದ್ಯ ಗೋಪಾಲವಿಠಲ.....ಗೋಪಾಲವಿಠಲ; ವಿಠಲ ವಿಠಲ ಗೋಪಾಲವಿಠಲ
ಯೋಗಿವಂದ್ಯ ಗೋಪಾಲವಿಠಲ ತಲೆ ಭಾಗಿ ನಿನ್ನನೇ ಬೇಡಿಕೊಂಬೆ ।।೫।।

HyangE maaDalayya KrishNa 

Author : Shree Gopala Dasaru

HyangE maaDalayya krishNa hOgutidE aayushya
mangalAnga bhava bandhava biDisi ninna Dingarigana maaDo ananga janaka||pa||

yEsu janumada sukrutada phalavO taanu janisalAgi
bhoosuradehada janumavu enagE sambhavisidEyAgi |
mOdateertha mata chihnitanAgadE dOshakE OLagAgi
lEshasAdhanava kANadE duHsahavAsadindalE dina dina kAledE||1||

shashimukha kanakada aashegE bErEtu vasupati ninnaDiya
hasanAgi ninna nEnEyadE krupEya gaLisadE keTtEnayya |
nishEhagalu sthiravEndu tanuvanu pOshisalAshisi jEEya
kusuridE nElavO sarvakAla nin oDEtanavEmbuva bagEyanu ariyadE||2||

nErEnambidE paavaTigaLu ella saridu hOdavalla
maraLi E pariya janumavu baruva bharavasEyantu illa |
paripari vishayada aashEyu enagE kiridu aayitalla
hariyE jagadi neenObbanalladE pOrevarinnaru illavalla||3||

avani OlagE puNyakshEtra charisuva havaNike enagilla
pavanaatmaka guru madhwa shastrada pravachana kELalilla |
tavakadinda guru hiriyara sEvisi avara Olisalilla
ravinandana keLidara uttara kODe vivarasaraku ondaadaru illa||4||

bhAgavatarODagUDi upAvAsa jAgara ondudina maaDalilla
raagadi shukamuni pElDa harikathE samyOgavEmbOdilla |
neeguvanta bhava bhayava bhakuti vairAgyavEmbOdilla
yOgivandya gOpAlaviThala.... gOpAlaviThala; viThala viThala gOpalaviThala
yOgivandya gOpAlaviThala talE bhaagi ninnanne bEDikOmbE||5||


Listen to song by Shri Puttur Narasimha Nayak


Listen to song by Shri Vidyabhusha



Listen to song by Roopa - Deepa






No comments:

Post a Comment