ಗಜವದನ ಬೇಡುವೆ
ರಚನೆ: ಶ್ರೀ ಪುರಂದರದಾಸರು
ಗಜವದನ ಬೇಡುವೆ ಗೌರಿ ತನಯತ್ರಿಜಗ ವಂದಿತನೇ ಸುಜನರ ಪೊರೆವನೇ [ಪಲ್ಲವಿ]
ಪಾಶಾಂಕುಶಧರ ಪರಮ ಪವಿತ್ರ
ಮೂಷಿಕವಾಹನ ಮುನಿಜನಪ್ರೇಮಾ [ಅನುಪಲ್ಲವಿ ]
ಮೋದದಿ ನಿನ್ನಯ ಪಾದವ ತೋರೋ
ಸಾಧು ವಂದಿತನೆ ಆದರದಿಂದಲಿ [೧ ]
ಸರಸಿಜನಾಭ ಶ್ರಿ ಪುರಂದರ ವಿಠಲನ
ನಿರುತ ನೆನೆಯುವಂತೆ ದಯ ಮಾಡೋ [೨]
Gajavadana Beduve
Author : Purandara Dasaru
gajavadana bEDuve gourI tanayatrijagavaMditane sujanara porevane ||pa||
pAshAMkushadhara paramapavitra
mUShikavAhana munijanaprEma ||1||
mOdadi ninnaya pAdava tOrO
sAdhuvanditane Adaradindali ||2||
sarasijanAbha shrI puraMdaraviThalana
niruta neneyuvante daya mADO ||3||
Listen to Song by Vidushi Sangeeta Katti
Listen to song from Shri KJ Yesudas
No comments:
Post a Comment