ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ
ಗೀತ ರಚನೆ : ಶ್ರೀ ಪುರಂದರ ವಿಠ್ಠಲ
ಬಿಡುವೇನೇನಯ್ಯ ಹನುಮ, ಸುಮ್ಮನೆ ಬಿಡುವೇನೇನಯ್ಯ||
ಬಿಡುವೆನೇನೋ ಹನುಮ ನಿನ್ನ ಆಡಿಗಳಿಗೆ ಶಿರವ ಬಾಗಿ
ಒಡೆಯನಲ್ಲಿ ಜ್ಞಾನ ಭಕುತಿಯ ಕೊಡುವ ತನಕ ಸುಮ್ಮನೇ ನಿನ್ನ||
ಹಸ್ತವನ್ನು ಎತ್ತಿದರೇನು ಹಾರಗಳನ್ನು ಇಟ್ಟರೆ (ಹಾರಗಾಲ ಹಾಕಿದರೆ)ಏನು
ಭೃತ್ಯನು ನಿನ್ನವನು ನಾನು ಹಸ್ತಿವರ್ಧನ ತೋರುವ ತನಕ||
ಹಲ್ಲುಮುಡಿಯ ಕಚ್ಚಿದರೇನು ಅಂಜುವೆನೇನೋ ನಿನಗೆ ನಾನು
ಫುಲ್ಲನಾಭ ನಲ್ಲಿ ಎನ್ನ ಮನಸಾ ನೀ ನಿಲ್ಲಿಸುವ ತನಕ||
ಡೊಂಕು ಮೋರೆಯ ಬಾಲವ ತಿದ್ದಿ ಹೂಂಕರಿಸಿದರೆ ಅಂಜುವನಲ್ಲ
ಕಿಂಕರ ನಿನ್ನವನು ನಾನು ಪುರಂಧರ ವಿಠಲನ ತೋರುವ ತನಕ||
Biduvenenayya Hanuma Summane Biduvenenayya
Author : Shree Purandara Dasaru
biDuvenenayya hanuma, summane biDuvenenayya ||
biDuvenEno hanuma ninna aDigaLige shirava bAgi
oDeyanalli jnana bhakutiya koDuva tanaka summane ninna ||
hastavannu ettidarenu hAragaLannu iTTare(hAragAla hAkidare) enu
bhRutyanu ninnavanu naanu hastivardhana thoruva thanaka ||
hallumuDiya kacchidarEnu anjuveneno ninage naanu
phulla nabhanalli enna manasa ni nillisuva tanaka ||
Donku moreya bAlava tiddi hunkarisidare anjuvanallA
kinkara ninnavanu naanu purandara Vittalana toruva tanaka ||
Listen to song by Shri Vidyabhushana
Listen to song by R Sheshagiri Das
No comments:
Post a Comment