ಆವ ರೋಗವೊ ಎನಗೆ ದೇವಧನ್ವಂತ್ರಿ
ಕಲಿ ಯುಗ ಕಳೆದಂತೆಲ್ಲ ಭೂಮಿಯ ಮೇಲೆ ಪಾಪ , ದುಷ್ಕೃತ್ಯ , ರೋಗ ರಿಜುನಗಳು ಹರಡುತ್ತವೆ. ನಾವಿರುವ ಈಗಿನ ಕಾಲದಲ್ಲೂ ಕೊರೊನ , ಎಬೋಲಾ ದಂತಹ ರೋಗ ಮಾರಿಗಳು ಮನುಶ್ಯರಿಗೆ ಬಾಧಿಸುತ್ತಿವೆ. ಬೇರೆಲ್ಲವ ಮರೆತು ಹರಿಯ ನಾಮ ಸ್ಮರಣೆ ಮಾಡೋಣ - ಹರಿಯ ಕೃಪೆಗೆ ಪಾತ್ರರಾಗೋಣ. ಈ ಪರಿಗೆ ನಮ್ಮನ್ನು ಪ್ರೇರೇಪಿಸುವ ಈ ರಚನೆ ಗೋಪಾಲ ದಾಸರದು.
ರಚನೆ : ಶ್ರೀ ಗೋಪಾಲ ದಾಸರು
ಆವ ರೋಗವು ಎನಗೆ ದೇವಧನ್ವಂತ್ರಿ ||ಪ||
ಸಾವಧಾನದಿ ಕೈಯ್ಯ ಪಿಡಿದು ನೀ ನೋಡಯ್ಯ ||ಅ.ಪ.||ಹರಿಮೂರ್ತಿಗಳು ಕಾಣಿಸವು ಎನ್ನ ಕಂಗಳಿಗೆ
ಹರಿಯ ಕೀರ್ತನೆಯು ಕೇಳಿಸದೆನ್ನ ಕಿವಿಗೆ
ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿ ಮಂತ್ರ ಸ್ತೋತ್ರ ಬಾರದು ಎನ್ನ ನಾಲಿಗೆಗೆ
ಹರಿ ಪ್ರಸಾದವು ಜಿಹ್ವೆಗೆ ಸವಿಯಾಗದಯ್ಯ||೧||
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಹರಿಪಾದ ಸೇವೆಗೆನ್ನ ಹಸ್ತಗಳು ಚಲಿಸವು
ಗುರುಹಿರಿಯರಂಘ್ರಿಗೆ ಶಿರ ಬಾಗದಯ್ಯ
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯ ನಿರ್ಮಾಲ್ಯವಾಘ್ರಾಣಿಸದು ನಾಸಿಕವು
ಹರಿಯಾತ್ರೆಗಳಿಗೆನ್ನ ಕಾಲೇಳದಯ್ಯ||೨||
ಅನಾಥಬಂಧು ಗೋಪಾಲವಿಠಲರೇಯ
ಅನಾಥಬಂಧು ಗೋಪಾಲವಿಠಲರೇಯ
ಎನ್ನ ಭಾಗದ ವೈದ್ಯ ನೀನೆಯಾದೆ
ಅನಾದಿ ಕಾಲದ ಭವರೋಗ ಕಳೆಯಯ್ಯ
ಅನಾದಿ ಕಾಲದ ಭವರೋಗ ಕಳೆಯಯ್ಯ
ನಾನೆಂದಿಗು ಮರೆಯೆ ನೀ ಮಾಡಿದುಪಕಾರ ||೩||
Aava Rogavu Enage Deva Dhanvanthri
Author : Shri Gopala Dasaru
Aava rogavu enage deva dhanvanthri ||p||saavadhaanadhi kaiyya pididhu nee nodayya ||a pa||
Hari moorthigalu kaanisavu enna kangaLige
Hariya keerthane kelisadenna kivige
Hari mantra stotra baaradhu enna naaligege
Hari prasaadhavu jihvege saviyaagadhayya ||1||
Haripaadha sevegenna hasthagalu chalisavu
Guru hiriyarangrige shira baagadhayya
Hariya nirmaalyavaagraNisadhu naasikavu
Hariyaathregaligenna kaaleladhayya ||2||
Anaatha Bhandhu gopaalavitalareya
Enna Bhaagadha vydya neeneyaadhe
Anaadhi kaalada bhavaroga kaleyayya
Naanendhigoo Mareye nee Maadidupakaara ||3||
Listen to song by Shri Puttur Narasimha Nayak
Listen to song by Padmaja Vasudevachar
Listen to song by Shree Harsha
Listen to song Keetan Holla
No comments:
Post a Comment