Pages

Friday, May 15, 2020

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೊ / Enu Dhanyalo Lakumi Entha Manyalo

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೊ





ಗೀತ ರಚನೆ  : ಶ್ರೀ ಪುರಂದರ ದಾಸರು 

ಏನು ಧನ್ಯಳೋ ಲಕುಮಿ ಎಂಥ ಮಾನ್ಯಳೊ ||ಪ ||
ಸಾನುರಾಗದಿಂದ ಹರಿಯ ತಾನೆ ಸೇವೆ ಮಾಡುತಿಹಳು || ಅಪ ||

ಕೋಟಿ ಕೋಟಿ ಭೃತ್ಯರಿರಲು ಹಾಟಕಾಂಬರನ ಸೇವೆ
ಸಾಟಿ ಯಿಲ್ಲದೆ ಮಾಡಿ ಪೂರ್ಣ ನೋಟದಿಂದ ಸುಖಿಸುತಿಹಳೊ || ೧ ||

ಛತ್ರ ಚಾಮರ ವ್ಯಜನ ಪರ್ಯಂತ  ಪಾತ್ರ ರೂಪದಲ್ಲಿ ನಿಂತು
ಚಿತ್ತಚರಿತನಾದ ಹರಿಯ ನಿತ್ಯ ಸೇವೆ ಮಾಡುತಿಹಳೊ || ೨ ||

ಸರ್ವ ಸ್ಥಳದಿ ವ್ಯಾಪ್ತನಾದ ಸರ್ವದೋಷ ರಹಿತನಾದ
ಸರ್ವ ವಂದ್ಯನಾದ ಪುರಂದರವಿಠಲನ್ನ ಸೇವಿಸುತಿಹಳೊ || ೩ ||


Enu Dhanyalo Lakumi Entha Manyalo 

Author : Shri Purandara Dasaru


enu dhanyalo lakumi  entha manyalo
sanuragadinda hariya tane seve madutihalu |

koti koti brutyariralu hatakanbarana seve
sati yillade madi purna nota dinda sukisutihalo || 1 ||

chatra chamara vyajana pariyanka patra rupadalli nintu
chitta charitanaada hariya nitya seve madutihalo || 2 ||

sarva sthaladi vyaptanada sarvadosha rahitanada
sarva vandyanaada purandaravithalanna sevisutihalo | 3 |



Listen to song by Shri Vidyabhushana



Listen to song by Shri KV Narayanaswamy


Listen to song by Shri Kavitha Shenoy



No comments:

Post a Comment