Pages

Thursday, May 28, 2020

ತುಂಗಾತೀರದಿ ನಿಂತ ಸುಯತಿವರನ್ಯಾರೆ / Tunga teeradi ninta suyativaranyAre

ತುಂಗಾತೀರದಿ ನಿಂತ ಸುಯತಿವರನ್ಯಾರೆ



ತುಂಗಾತೀರದಿ ನಿಂತ ಸುಯತಿವರನ್ಯಾರೆ ಪೇಳಮ್ಮಾ | ಪ|
ಸಂಗೀತಪ್ರಿಯ ಮಂಗಳ ಸುಗಣತರಂಗ ಮುನಿಕುಲೋತ್ತುಂಗಕಾಣಮ್ಮ | ಅಪ |

ಚೆಲುವ ಸುಮುಖ ಫಣೆಯಲ್ಲಿ ತಿಲಕ ನಾಮಗಳು ನೋಡಮ್ಮ
ಜಲಜಮಣಿಯ ಕೊರಳಲ್ಲಿ ತುಳಸುಮಾಲೆಗಳು ಪೇಳಮ್ಮ
ಸುಲಪಿತ ಕಮಂಡಲು ದಂಡವನೆ ಧರಿಸಿಹನೇ ನೋಡಮ್ಮ
ಕ್ಟುಲ್ಲ ಹಿರಣ್ಯಕನಲ್ಲಿ ಜನಿಸಿದ ಪ್ರಹ್ಲಾದನು ತಾನಿಲ್ಲಿಹನಮ್ಮ  |೧ |

ಸುಂದರ ಚರಣಾರವಿಂದಕೆ ಭಕುತಿಯಲಿಂದ ನೋಡಮ್ಮ
ವಂದಿಸಿ ಸ್ತುತಿಸುವ ಭೂಸುರವೃಂದ ನೋಡಮ್ಮ
ಚಂದದಲಂಕೃತಿಯಿಂದ ಶೋಭಿಸುವಾನಂದ ನೋಡಮ್ಮ
ಹಿಂದೆ ವ್ಯಾಸಮುನಿಯೆಂದೆನಿಸಿದ ಕರ್ಮಂದಿಗಳರಸಘದಿಂದ ರಹಿತನೆ | ೨|

ಅಭಿನವ ಜನಾರ್ದನ ವಿಠಲನ ದ್ಯಾನಿಸುವ ನೋಡಮ್ಮ
ಅಭಿವಂದಿಸಿದವರಿಗೆ ಅಖಿಲಾರ್ಥವ ಸಲ್ಲಿಸುವ ನೋಡಮ್ಮ
ನಭಮಣಿಯಂದರದಿ ವಿವಿಧದಿ ಶೋಭಿಸುವ ನೋಡಮ್ಮ
ಶುಭಗುಣಗಣನಿಧಿ ರಾಘವೇಂದ್ರ ಗುರು ಅಬುಜಭವಾಂಡದಿ ಪ್ರಬಲಕಾಣಮ್ಮ |೩|


Tunga teeradi ninta suyativaranyAre


tunga teeradi ninta suyativaranyAre pELammaYya
sangeetapriya mangalasuguNataraMga munikulOttuMga kANamma ||

cheluva sumukha phaNeyalli tilaka nAmagaLu nODamma
jalamaNiya koraLalli tulasimAlegaLu pELamma
sulalita kamaMDalu daMDavane dharisihane nODamma
kShulla hiraNyakanalli janisida prahlAdanu tAnillihanamma ||1||

suMdara charaNAraviMdake bhakutiyaliMda nODamma
vaMdisi stutisuva bhUsuravRuMda nODamma
chaMdadalaMkRutiyiMda shObhisuvAnaMda nODamma
hiMde vyAsamuniyeMdenisida karmaMdigaLa rasaghadiMda rahitane ||2||

abhinava janArdhana viThalana dhyAnisuva nODamma
abhivaMdisidavarige akhilArthava sallisuva nODamma
nabhamaNiyaMdadi vividhadi shObhisuva nODamma
shubhaguNanidhi rAghavEMdra guru abujabhavAMDadi prabala kANamma ||3||

Listen to song from Shri Bhimsen Joshi


Listen to song from Shri Vidyabhushana


Listen to song from Mysore Ramachandrachar



No comments:

Post a Comment