Pages

Monday, May 25, 2020

ಒಂದೇ ನಾಮವು ಸಾಲದೇ / Onde Namavu Salade

 ಒಂದೇ ನಾಮವು ಸಾಲದೇ



ರಚನೆ : ಶ್ರೀ ಪುರಂದರ ದಾಸರು 

ಒಂದೇ ನಾಮವು ಸಾಲದೇ ಶ್ರೀ ಹರಿಯೆಂಬ
ಒಂದೇ ನಾಮವು ಸಾಲದೇ || ಪ ||
ಒಂದೇ ನಾಮವು ಭವ ಬಂಧನ ಬಿಡಿಸುವುದೆಂದು
ವೇದಂಗಳಾನಂದದಿ ಸ್ತುತಿಸುವ || ಅ.ಪ ||

ಉಭಯರಾಯರು ಸೇರಿ ಮುದದಿಲೆತ್ತವನಾಡಿ
ಸಭೆಯೊಳು ಧರ್ಮಜ ಸತಿಯ ಸೋಲೆ
ನಭಕ ಕೈಯೆತ್ತಿ ದ್ರೌಪದಿ ಕೃಷ್ಣಾಯೆನಲು
ಇಭರಾಜ ಗಮನೆಗಕ್ಷಯ ವಸ್ತ್ರವ ನಿತ್ತ || ೧ || 

ಹಿಂದೊಬ್ಬ ಋಷಿಪುತ್ರ ಅಂದು ದಾಸಿಯ
ಕೂಡೆ ಸಂದೇಹವಿಲ್ಲದೆ ಹಲವು ಕಾಲ 
ದಂದುಗದೊಳು ಸಿಲುಕಿ ನಿಂದಂತ್ಯಕಾಲದಿ
ಕಂದನಾರಗನೆಂದು ಕರೆಯಲಭಯ ವಿತ್ತ || ೨ || 

ಕಾಶಿಯ ಪುರದೊಳಗೆ ಈಶ ಭಕುತಿಯಿಂದ
ಸಾಸಿರ ನಾಮದ ರಾಮನೆಂಬ 
ಶ್ರೀಶನ ನಾಮದ ಉಪದೇಶ ಸತಿಗಿತ್ತ
ವಾಸುದೇವ ಶ್ರೀ ಪುರಂದರ ವಿಠ್ಠಲನ || ೩ ||

Onde Namavu Salade

Author : Shri Purandara Dasaru

onde namavu salade sree hariyenba
onde namavu salade || pa || 
onde namavu bhava bandhana bidisuvudendu
vedangalanandadi stutisuva || a.pa || 

ubhayarayaru seri mudadilettavanadi
sabheyolu dharmaja satiya sole 
nabhaka kaiyetti draupadi krushna yenalu
ibharaja gamanegakshaya vastrava nitta || 1 || 

hindobba rushiputra andu dasiya kude
sandehavillade halavu kala 
dandugadolu siluki nindantyakaladi
kandanaraganendu kareyalabhaya vitta || 2 || 

kashiya puradolage eesha bhakutiyinda
sasira namada ramanenba 
shreeshana namada upadesa satigitta
vasudeva sree purandara vittalana || 3 ||


Listen to song by Shri Vidyabhushana



Listen to song by Smt Sangeeta Kulkarni



Listen to song by Sachin S Bharadwaj


No comments:

Post a Comment