Pages

Saturday, May 30, 2020

ಎನ್ನ ಕಂದ ಹಳ್ಳಿಯ ಹನುಮ / Enna Kanda HaLLiya Hanuma



ರಚನೆ : ಕನಕ ದಾಸರು 

ಎನ್ನ ಕಂದ ಹಳ್ಳಿಯ ಹನುಮ ಚೆನ್ನಾಗಿಹರೆ ಲಕ್ಷ್ಮಣ ದೇವರು |
ಶ್ರೀಪತಿ ರಾಘವ ಕ್ಷೇಮದಲಿಹರೆ ॥ಅ.ಷ॥

ತುಪ್ಪ ಪಂಚಾಮೃತ ಅಂದು ಅಡವಿ ಗಡ್ಡೆಗಳಿಂದು
ಕರ್ಪೂರ ವೀಳ್ಯ  ಅಂದು ಕುರುಕುರು ಇಂದು
ಸುಪ್ಪತ್ತಿಗೆ ಮಂಚ ಅಂದು ಹುಲ್ಲುಹಾಸಿಗೆ ಇಂದು
ಶ್ರೀಪತಿ ರಾಘವ ಕ್ಷೇಮದಲಿಹರೆ ॥೧॥

ನವ ವಸ್ತ್ರಗಳು ಅಂದು ನಾರು ಸೀರೆಗಳಿಂದು
ಹೂವಿನ ಗಂಟು ಅಂದು ಜಡೆಗಳಿಂದು
ಜವ್ವಾಜಿ ಕಸ್ತೂರಿ ಅಂದು ಭಸಿತ ಧೂಳಿ ಇಂದು
ಶ್ರೀಪತಿ ರಾಘವ ಕ್ಷೇಮದಲಿಹರೆ ॥೨॥

ಕನಕ ರಥಗಳು ಅಂದು ಕಾಲುನಡಿಗೆ ಇಂದು
ಘನ ಛತ್ರ ಚಾಮರ ಅಂದು ಬಿಸಿಲೂ ಇಂದು
ಸನಕಾದಿ ಓಲೈಸುವ ಆದಿಕೇಶವ
ನಮ್ಮ ಹನುಮೇಶ ರಾಘವ ಕ್ಷೇಮದಲಿಹರೆ ॥೩॥

Author : Shri Kanaka Dasaru

enna kanda haLLiya hanuma chennagihare lakshmaNa devaru
shreepati raaghava kshemadalihare ॥pa॥

tuppa pachaamruta andu aDavi guDDagaLindu
karpoora veeLye andu kuru kuru indu
suppattige mancha andu hullu haasige indu
shreepati raghava kshemadalihare ॥1॥

nava vastragaLu andu naaru seeregaLindu
hoovina gantu andu jaDegaLindu
javvaji kasturi andu bhasita dhooLi indu
shree pati kshemadalihare ॥2॥

kanaka rathagaLu andu kaalunaDige indu
ghana chatra chaamara andu bisilu indu
sanakaadi olaisuva aadikeshava
namma hunumesha raghava kshemadalihare ॥3॥


Listen to song by Shri Anantacharya Katageri Dasaru



Listen to song by Shri Vidyabhushana




No comments:

Post a Comment